Home

ACHIEVEMENTS OF MUNCIPAL REFORMS CELL
ಬ್ಯಾಡಗಿ ಪುರಸಭೆ ಬಗ್ಗೆ ಸಂಕ್ಷಿಪ್ತ ಪರಿಚಯ :
ಬ್ಯಾಡಗಿ ಪುರಸಭೆಯು 1879 ರಲ್ಲಿ ಸ್ಥಾಪನೆಯಾಯಿತು. ಬ್ಯಾಡಗಿ ಪುರಸಭೆಯು ತನ್ನ ಭದ್ರ ಅಸ್ತಿತ್ವದೊಂದಿಗೆ ನೂರು ವರ್ಷಗಳನ್ನು ದಾಟಿ ಹಂತ ಹಂತವಾಗಿ ಪ್ರಗತಿಪರ ಸುಧಾರಣೆಗಳೊಂದಿಗೆ ಕಾರ್ಯಗೌರವ ಹೆಚ್ಚಿಸುತ್ತಾ ಬರುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳು ನಾಗರೀಕ ಸಂಸ್ಕೃತಿಗಳು ಮೂಡಿ ಬರುವ ಉಗಮ ಸ್ಥಾನಗಳಾಗಿವೆ. ಬ್ಯಾಡಗಿ ಪಟ್ಟಣವು ಪುನ್ಹೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ - 05 ಕಿ.ಮೀ ಅಂತರದಲ್ಲಿದೆ. ಬ್ಯಾಡಗಿ ಪಟ್ಟಣವು ಒಣ ಮೆಣಸಿನಕಾಯಿ ಮಾರಾಟಕ್ಕೆ ದೇಶ ವಿದೇಶಗಳಲ್ಲಿಯೇ ಪ್ರಸಿದ್ಧಿಯನ್ನು ಪಡೆದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಒಣ ಮೆಣಸಿನಕಾಯಿಗಳನ್ನು ಸಂಸ್ಕರಿಸುವ ಬೃಹತ್ ಪ್ರಮಾಣ ಶಿಥಲೀಕರಣ ಘಟಕಗಳಿವೆ. ಇದು ಜಿಲ್ಲಾಕೇಂದ್ರವಾದ ಹಾವೇರಿ ನಗರದಿಂದ 18 ಕಿ.ಮೀ ದೂರದಲ್ಲಿದೆ. 2011 ರ ಜನಗಣತಿಯ ಪ್ರಕಾರ ಬ್ಯಾಡಗಿ ಪಟ್ಟಣವು 30,073 ಜನಸಂಖ್ಯೆಯನ್ನು ಹೊಂದಿದೆ.ಬ್ಯಾಡಗಿ ಪುರಸಭೆಯು 23 ವಾರ್ಡುಗಳನ್ನು ಹೊಂದಿದ್ದು, 23 ಜನ ಚುನಾಯಿತ ಸದಸ್ಯರು ಹಾಗೂ, 5 ಜನ ನಾಮ ನಿರ್ದೇಶಿತ ಸದಸ್ಯರನ್ನು ಹೊಂದಿದೆ. ಬ್ಯಾಡಗಿ ಪುರಸಭೆಯು 4.20 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ.ಬ್ಯಾಡಗಿ ಪುರಸಭೆಯು 1984-85 ನೇ ಸಾಲಿನ ಕರ್ನಾಟಕ ಸರ್ಕಾರದಿಂದ "ಅತ್ಯುತ್ತಮ ಪುರಸಭೆ" ಎಂದು ಪುರಸ್ಕೃತಗೊಂಡಿದ್ದು, ನಗದು ಬಹುಮಾನವಾಗಿ 5ಲಕ್ಷ ರೂಪಾಯಿ ಹಾಗೂ ಪ್ರಮಾಣಪತ್ರವನ್ನು ಪಡೆದಿದೆ ಎಂದು ಹೇಳಲು ತುಂಬಾ ಸಂತೋಷವೆನಿಸುತ್ತದೆ. ಮತ್ತೆ ಸನ್ 1986-87 ನೇ ಸಾಲಿನಲ್ಲಿ "ದ್ವಿತೀಯ ಅತ್ಯುತ್ತಮ ಪುರಸಭೆ" ಎಂಬ ಕೀರ್ತಿಗೆ ಪಾತ್ರವಾಗಿದ್ದು , ನಗದು ಬಹುಮಾನವಾಗಿ 2 ಲಕ್ಷ ರೂಪಾಯಿ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದಿದೆ.ಬ್ಯಾಡಗಿ ಪಟ್ಟಣವು ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದ್ದು,ಅವುಗಳಲ್ಲಿ ಪಟ್ಟಣಕ್ಕೆ ಹೊಂದಿಕೊಂಡಿರುವ ಬೆಟ್ಟದ ಮಲ್ಲೇಶ್ವರ ದೇವಸ್ಥಾನ,ಸುಪ್ರಸಿದ್ಧ ಕದರಮಂಡಲಗಿ ಕಾಂತೇಶ ಸ್ವಾಮಿ ದೇವಸ್ಥಾನ ಪ್ರಮುಖವಾಗಿವೆ.ಇನ್ನೊಂದು ವಿಶೇಷವೆಂದರೆ ರಾಜ್ಯಮಟ್ಟದ ಪ್ರವಾಸಿ ತಾಣವಾದ ಕಾಗಿನೆಲೆ ಕ್ಷೇತ್ರವು ಕೂಡ ಇದೇ ತಾಲೂಕಿಗೆ ಬರುತ್ತದೆ. ಅದರಲ್ಲಿ ಕಾಗಿನೆಲೆ ಆದಿಕೇಶವ ದೇವಸ್ಥಾನ, ಕನಕದಾಸ ಮಂದಿರ ಪ್ರಖ್ಯಾತವೆನಿಸಿವೆ. ಪುರಸಭೆಯು ಕೆ.ಎಂ.ಆರ್.ಪಿ ಯೋಜನೆಯಡಿ ಸಾರ್ವಜನಿಕರಿಗೆ ಮುಖ್ಯವಾಗಿ ಬೇಕಾಗುವ ಜನನ-ಮರಣಗಳ ದಾಖಲೆಗಳನ್ನು ಸನ್ 1990ರ ವರ್ಷದಿಂದ ಇಲ್ಲಿಯವರೆಗೂ ಗಣಕೀಕರಣಗೊಳಿಸಿ ಸಾರ್ವಜನಿಕರಿಗೆ ನೀಡುತ್ತಿದ್ದೇವೆ. ಸಾರ್ವಜನಿಕರಿಂದ ಬರುವ ಸಮಸ್ಯೆ ಕುಂದು-ಕೊರತೆಗಳನ್ನು ಅತೀ ಶೀಘ್ರವಾಗಿ ಪರಿಹರಿಸಲು ಸಾರ್ವಜನಿಕ ಕುಂದು ಕೊರತೆ ನಿವಾರಣಾ ಘಟಕವನ್ನು ದಿನಾಂಕ 06-12-2008ರಿಂದ ತೆರೆದಿದ್ದು ಇದು ದಿನದ 24 ಘಂಟೆಗಳ ಕಾರ್ಯ ಕಾರ್ಯ ನಿರ್ವಹಿಸುತ್ತಿದೆ. ಸದರ ಘಟಕದ ದೂರವಾಣಿಸ ಂಖ್ಯೆ 08375-228666 ಆಗಿದ್ದು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ದೂರವಾಣಿ ಮೂಲಕವೂ ಸಲ್ಲಿಸಬಹುದು.
24 Hours Help Line Service: 08375-228666
ಬ್ಯಾಡಗಿ ಪುರಸಭೆಯ ಪ್ರಮುಖ ಧ್ಯೇಯೋದ್ದೇಶಗಳು :
- ಬ್ಯಾಡಗಿ ಪಟ್ಟಣದ ನಾಗರೀಕರ ಮೂಲಭೂತ ಅವಶ್ಯಕತೆಗಳಾದ ಶುದ್ಧ ಕುಡಿಯುವ ನೀರು,ಬೀದಿ ದೀಪ ಹಾಗೂ ಪರಿಸರ ನೈರ್ಮಲ್ಯ ಸ್ವಚ್ಛತೆಯ ಬಗ್ಗೆ ಪುರಸಭೆಯು ಪ್ರಮುಖ ಆದ್ಯತೆ ನೀಡಿರುತ್ತದೆ.
- ಈ ನಿಟ್ಟಿನಲ್ಲಿ ಪಟ್ಟಣಕ್ಕೆ ರಾಣೆಬೆನ್ನೂರ ಜಲ ಶುದ್ಧಿಕರಣ ಘಟಕದ ಪಂಪ್ ಹೌಸ್ ನಿಂದ ಮುದೇನೂರ ಬಳಿಯ ತುಂಗಭದ್ರಾ ನದಿಯಿಂದ ಶುದ್ಧೀಕರಿಸಿದ ನೀರು ಸರಬರಾಜು ಮಾಡಲಾಗುತ್ತಿದೆ.
- ಪಟ್ಟಣದಲ್ಲಿ ದಿನ ನಿತ್ಯ ಸ್ವಚ್ಛತೆ ಕಾಪಾಡುವ ಸಲುವಾಗಿ ಪಟ್ಟಣದ ದೈನಂದಿನ ತ್ಯಾಜ್ಯವನ್ನು ಘನ ತ್ಯಾಜ್ಯ ವಿಲೇವಾರಿ ಸ್ಥಳಕ್ಕೆ ರವಾನಿಸಲಾಗುತ್ತಿದ್ದು ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮನೆ - ಮನೆಗಳಿಗೆ ಬೇಟಿ ನೀಡಿ ಕಸ ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಪಟ್ಟಣದಲ್ಲಿ ಸೊಳ್ಳೆಗಳ ಹಾವಳಿ ತಡೆಗಟ್ಟುವ ಉದ್ದೇಶದಿಂದ ಪ್ರತಿ ದಿನ ಫಾಗಿಂಗ್ ಮಾಡಲಾಗುತ್ತಿದೆ.
- ಸರ್ಕಾರದ ವಿವಿಧ ಯೋಜನೆಗಳಾದ ಎಸ್.ಎಫ್.ಸಿ.,,ಸಿ.ಎಂ.ಎಸ್.ಎಂ.ಟಿ.ಡಿ.ಪಿ, 13 ನೇ ಹಣಕಾಸು ಹಾಗೂ ಇನ್ನಿತರ ಯೋಜನೆಗಳಡಿಯಲ್ಲಿ ಪಟ್ಟಣದ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳಾದ ರಸ್ತೆ , ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
- ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಾಗೂ ಬಡತನ ನಿರ್ಮೂಲನೆಯ ನಿಟ್ಟಿನಲ್ಲಿ 22.75%, 7.25%, 3%, ನಮ್ಮ ಮನೆ ವಸತಿ ಯೋಜನೆ ಹಾಗೂ ಎಸ್.ಜೆ.ಎಸ್.ಆರ್.ವೈ ಇತ್ಯಾದಿ ಯೋಜನೆಗಳಡಿಯಲ್ಲಿ ಹಿಂದುಳಿದ ವರ್ಗಗಳ,ಆರ್ಥಿಕವಾಗಿ ಹಿಂದುಳಿದವರ,ವಿಕಲ ಚೇತನರ ಅಭಿವೃದ್ಧಿಗಾಗಿ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.
- ಸಾರ್ವಜನಿಕ ಹಿತ ದೃಷ್ಟಿಯಿಂದ ಹಾಗೂ ಕಛೇರಿ ಕೆಲಸ ಕಾರ್ಯಗಳ ವ್ಯವಸ್ಥಿತ ನಿರ್ವಹಣೆಯ ಸದುದ್ದೇಶದಿಂದ ಬ್ಯಾಡಗಿ ಪುರಸಭೆ ಕಾರ್ಯಾಲಯದ ಆಡಳಿತ ವ್ಯವಸ್ಥೆಯನ್ನು ಗಣಕೀಕರಣಗೊಳಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.
- ಈ ನಿಟ್ಟಿನಲ್ಲಿ ಕರ್ನಾಟಕ ಪೌರ ಸುಧಾರಣಾ ಯೋಜನೆಯಡಿ ಪೌರಾಡಳಿತ ನಿರ್ದೇಶನಾಲಯ, ಪೌರ ಸುಧಾರಣಾ ಕೋಶ, ಬೆಂಗಳೂರುರವರ ಸಹಯೋಗದೊಂದಿಗೆ ಈಗಾಗಲೇ ಹಲವಾರು ಮಾಹಿತಿಗಳನ್ನು ಗಣಕೀಕರಣಗೊಳಿಸಲಾಗಿದ್ದು ಪಟ್ಟಣದ ನಾಗರೀಕರು ತಮ್ಮ ಮಾಹಿತಿಯನ್ನ ಪಡೆಯಬಹುದಾದ ಸೌಲಭ್ಯ ಒದಗಿಸಲಾಗಿರುತ್ತದೆ.
ಬ್ಯಾಡಗಿ ಪುರಸಭೆಯಲ್ಲಿ ಕೆ.ಎಂ.ಆರ್.ಪಿ. ಗಣಕೀಕರಣ ಯೋಜನೆಗಳ ಅನುಷ್ಟಾನದ ಬಗ್ಗೆ ಕಿರು ಪರಿಚಯ
WEBSITE IS UPDATED ON : 18-05-2012
This page is maintained by Chief Officer, TMC Byadgi

